ಬಿಗ್ಬಾಸ್ ನಿರ್ಧಾರದಿಂದ ಶಾಕ್ ಆಗಿದೆ: ರಂಜಿತ್ ಬಿಗ್ಬಾಸ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ಕನ್ನಡ ಶೋ ಯಿಂದ ಹೊರಗಡೆ ಬಂದಮೇಲೆ ರಂಜಿತ್ ಅವರು ಮಾಧ್ಯಮದವರ ಪ್ರಶ್ನೆಗೆ ಉತರಿಸುತ್ತಾ, ಬಿಗ್ ಬಾಸ್ ನ ನಿರ್ಧಾರ ಬೇಸರ ತಂದಿದೆ ಎಂದು ತಿಳಿಸಿದರು. ಈ ವಿಚಾರ ಪೂರ್ತಿಯಾಗಿ ತಿಳಿಯೋಣ ಬನ್ನಿ.
ಹೋದ ವಾರದ ಎಪಿಸೋಡ್ನಲ್ಲಿ ಮನೆಯವ್ರ ಮತ್ತು ಲಾಯರ್ ಜಗದೀಶ್ ರ ನಡುವಿಂದ ಜಗಳದ ಸಂದರ್ಭದಲ್ಲಿ, ಲಾಯರ್ ಜಗದೀಶ್ ಹೆಣ್ಣು ಮಕ್ಕಳ ಮೇಲೆ ಕೆಟ್ಟದಾಗಿ ಬಳಸಿರುವ ಪದಗಳ ಬಗ್ಗೆ ಮನೆಯವರೆಲ್ಲ ಪ್ರಶ್ನಿಸುತ್ತಾರೆ, ಇದು ಅತಿರೇಕಕ್ಕೆ ಹೋಗಿ ರಂಜಿತ್ ಅವರು ಜಗದೀಶ್ ಅವ್ರನ್ನ ತಳ್ಳುತಾರೆ. ಇದಾದ ನಂತರ ಬಿಗ್ ಬಾಸ್, ಹೆಣ್ಣು ಮಕ್ಕಳ ಮೇಲೆ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಜಗದೀಶ್ ಅವರನ್ನು ಎಲಿಮಿನೇಟ್ ಮಾಡುತಾರೆ ಹಾಗೂ ರಂಜಿತಾ ಅವರು ಜಗದೀಶ್ ಅವ್ರನ್ನ ತಳ್ಳಿದಕ್ಕೆ ರಂಜಿತ್ಅವರನ್ನು ಕೂಡ ಬಿಗ್ ಬಾಸ್ ಎಲಿಮಿನೇಟ್ ಮಾಡುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಆದ ಜಗಳದ ಬಗ್ಗೆ ಪ್ರತಿಕ್ರಿಯೆ:
ಈ ಬಗ್ಗೆ ರಂಜಿತ್ ಅವರು ಮಾಧ್ಯಮಗಳ ಪ್ರಶ್ನೆ ಗೆ ಉತ್ತರಿಸುತ್ತ. ಮನೆಯವರು ಲಾಯರ್ ಜಗದೀಶ್ ಅವರು ಹೆಣ್ಣುಮಕ್ಕಳ ಮೇಲೆ ಮಾಡುತಿದ್ದ ಪದಬಳಕೆಯನ್ನು ಪ್ರಶ್ನಿಸುವ ಸಂದರ್ಭದಲ್ಲಿ ಆದ ಘಟನೆ ಇದು. ಈ ಜಗಳ ಅತಿರೇಕಕ್ಕೆ ಹೋದಾಗ ಜಗದೀಶ್ ಅವ್ರು ಹೆಣ್ಣುಮಕ್ಕಳ ಮೈಮೇಲೆ ಬೀಳುವ ಸಂದರ್ಭದಲ್ಲಿ ನಾನು ಅವರನ್ನ ತಳ್ಳಿದ್ದೇನೆ, ಯಾರೆ ಈ ಪರಿಸ್ಥಿತಿಯಲ್ಲಿದ್ದರು ಅದನ್ನೇ ಮಾಡ್ತಿದ್ದರು ಮತ್ತು ನಾನು ಹೆಣ್ಣು ಮಕ್ಕಳನ್ನ ಪ್ರೊಟೆಕ್ಟ್ ಮಾಡಲು ಹೋಗಿ ಜಗದೀಶ್ ಅವರನ್ನ ತಳ್ಳಿದ್ದು , ಆದರೆ ಅದಕ್ಕೆ ಬಿಗ್ ಬಾಸ್ ನನ್ನ ಮನೆಯಿಂದ ಹೊರ ಹೋಗಲು ಹೇಳಿದ್ದು ನನಗೆ ಬೇಸರ ತಂದಿದೆ ಅಂತ ರಂಜಿತ್ ಹೇಳಿದರು.
ಲಾಯರ್ ಜಗದೀಶ್ ಅವರು ಎಲಿಮಿನೇಟ್ ಆದಾಗ ಮನೆಯವರು ಖುಷಿ ಪಟ್ಟಿದ್ರು ಆದರೆ ಆಮೇಲೆ ಬಾಗ್ ಬಾಸ್ ನನ್ನ ಕೂಡ ಎಲಿಮಿನೇಟ್ ಮಾಡಿದ್ರು, ಆಗ ಮನೆಯ ಎಲ್ಲಾ ತುಂಬಾ ಎಮೋಷನಲ್ ಆದ್ರೂ ಅವಾಗ ನನಿಗೆ ಮನೆಯವರು ನನ್ನ ಜೊತೆ ಎಷ್ಟು ಕನೆಕ್ಟ್ ಆಗಿದರೆ ಅಂತ ಗೊತಾಯ್ತು. ನಾನು ಎಲ್ಲ ಸ್ಪರ್ದಿಗಳಿಗೆ ಚೆನ್ನಾಗಿ ಆಡಿ ಮಾತು ನಾನು ಒಳ್ಳೆ ಕಾರಣಕ್ಕೆ ಹೊರಗೆ ಹೋಗ್ತಾ ಇದಿನಿ ಅಂತ ಹೇಳಿ ಸಮಾಧಾನ ಮಾಡಿ ಬಂದೆ ಅಂತ ರಂಜಿತ್ ಹೇಳಿದ್ರು.
ಆದರೆ ಹೊರಗೆ ಬಂದ್ಮೇಲೆ ಜನರ ರಿಯಾಕ್ಷನ್ ನೋಡಿ ರಂಜಿತ್ ಅವರಿಗೆ ಶಾಕ್ ಆಗಿತ್ತಂತೆ, ಯಾಕಂದ್ರೆ ಜನರು ಕೆಟ್ಟದುನ್ನ ಮೇಲೆ ಎತ್ತಿ ಹಿಡೀತಿದಾರೆ ಮತ್ತು ಒಳ್ಳೆದುನ್ನ ತುಳೀತಿದಾರೆ ಅದು ನನ್ನಗೆ ಬೇಸರ ತಂದಿದೆ ಅಂತ ಕೂಡ ಅವ್ರು ಹೇಳಿದ್ರು.
ತ್ರಿವಿಕ್ರಮ್ ಜೊತೆಗಿನ ಸ್ನೇಹದ ಬಗ್ಗೆ ರಂಜಿತ್ ಹೀಗೆ ಹೇಳಿದರು:
ತ್ರಿವಿಕ್ರಮ್ ಅವರ ಬಗ್ಗೆ ರಂಜಿತ್ ಗೆ ಕೇಳಿದಾಗ ಅವರು ಹೇಳಿದ್ರು, ನನಗೆ ತ್ರಿವಿಕ್ರಮ್ ಅವರ ಪರಿಚಯ ಮುಂಚೆಯಿಂದ ಇತ್ತು ಬಟ್ ನಾವು ಬಿಗ್ ಬಾಸ್ ಗೆ ಹೊದ್ಮೇಲೆ ತುಂಬಾ ಕನೆಕ್ಟ್ ಆದ್ವಿ, ಕಾಫಿ ಮತ್ತು ಊಟನು ಕೂಡ ಒಬ್ರಿಗೆ ಒಬ್ರು ಬಿಟ್ಟು ಮಾಡ್ತಿರ್ಲಿಲ್ಲ. ನಾವಿಬ್ರು ಬೆರೆಯವರ ಆತ ನೋಡಿ ಎಂಜಾಯ್ ಮಾಡ್ತಿದ್ವಿ ಹಾಗು ಯಾವತು ಹೊರಗಿನ ವಿಚಾರಗಳ್ನ ನಾವ್ ಮಾತಾಡ್ತಿರ್ಲಿಲ್ಲ. ನನ್ನ ಬಿಗ್ ಬಾಸ್ ಎಲಿಮಿನೇಟ್ ಮಾಡಿದಾಗ ತ್ರಿವಿಕ್ರಮ್ ತುಂಬಾ ಎಮೋಷನಲ್ ಆದ್ರು, ಅವ್ರ್ನ ಕೂಡ ಸಮಾಧಾನ ಮಾಡಿ ಬಂದೆ ಅಂತ ರಂಜಿತ್ ಅವ್ರು ಹೇಳಿದ್ರು.
ಬಿಗ್ ಬಾಸ್ ಮನೆಯ ಅನುಭವ: ಬಿಗ್ಬಾಸ್ ನಿರ್ಧಾರದಿಂದ ಶಾಕ್ ಆಗಿದೆ: ರಂಜಿತ್ ಬಿಗ್ಬಾಸ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ
ಬಿಗ್ ಬಾಸ್ ಅನುಭವದ ಬಗ್ಗೆ ಹೇಳ್ತಾ ರಂಜಿತ್ ಅವ್ರು ನಾನು ಮಿಡ್ಲ್ ಕ್ಲಾಸ್ ಫ್ಯಾಮಿಲಿ ಇಂದ ಬಂದವನು, ನಮಪ್ಪ ಡ್ರೈವರ್, ನಾವು ಕಷ್ಟಗಳ್ನ ನೋಡ್ಕೊಂಡೆ ಬಂದಿದಿವಿ, ನನಗು ಅನ್ನದ ಬೆಲೆ ಗೊತ್ತು. ಬಿಗ್ ಬಾಸ್ ಗೆ ಹೊದ್ಮೇಲೆ ತಾಳ್ಮೆ ಜಾಸ್ತಿ ಆಗಿದೆ, ಹೊಡಿಯೋದೇ ಅಥವಾ ಜಗಳ ಆಡೋದೇ ಜೀವನ ಅಲ್ಲ, ಅದ್ನ ಮೀರಿ ಸೈಲೆಂಟ್ ಆಗಿದ್ಕೊಂಡು ಹೇಗೆ ಬದುಕ್ಬೇಕು ಅನ್ನೋದುಂನ ಕಲಿತಿದ್ದೇನೆ ಅಂತ ಹೇಳಿದ್ರು.
ರಂಜಿತ್ ಇನ್ಸ್ಟಾಗ್ರಾಮ್ ಪ್ರೊಫೈಲ್ ಲಿಂಕ್: ಕ್ಲಿಕ್ ಮಾಡಿ
ಲಾಯರ್ ಜಗದೀಶ್ ಅವ್ರ ಬಗ್ಗೆ ರಂಜಿತ್ ಪ್ರತಿಕ್ರಿಯೆ:
ಲಾಯರ್ ಜಗದೀಶ್ ಅವ್ರು ಒಂಟಿಯಾಗಿರ್ತಿದ್ರು ಯಾಕಂದ್ರೆ , ಅವ್ರ ಮಾತುಗಳೆ ಹಾಗಿತ್ತು, ಬೇಕಾಬಿಟ್ಟಿ ಮಾತಾಡಿದ್ರು, ಏನಾದ್ರು ಸಲಹೆಗಳನ್ನ ಕೊಡಕ್ಕೆ ಹೋದ್ರೆ, ನೀನು ಯಾರು ಸಲಹೆ ಕೊಡಕ್ಕೆ ಅಂತ ಕೇಳ್ತಾ ಇದ್ರೂ. ಎಲ್ಲರಿಗೂ ಟಾಂಟ್ ಮಾಡ್ತಿದ್ರು, ಕಿತಾಡೋದುನ್ನೆ ಒಂದು ಕಂಟೆಂಟ್ ಮಾಡ್ಕೊಂಡಿದ್ರು. ಆದ್ರೆ ನಮಗೆ ಕಿತಾಡೊಕೆ ಇಷ್ಟ ಇಲ್ಲ, ನಾವು ಕಿತಾಡೊಕೆ ಬಂದಿಲ್ಲ ಹಾಗಾಗಿ ನಾವು ಆ ಜಾಗದಿಂದ ಎದೋಗತಿದ್ವಿ.
ಜಗದೀಶ್ ಅವ್ರು ಈ ಮುಂಚೆ ಮಂಜು, ಧರ್ಮ ಹಾಗು ತ್ರಿವಿಕ್ರಮ್ ಅವರಿಗೂ ಹೊಡೆದಿದ್ದಾರೆ. ತುಂಬಾ ಸಾರಿ ಹೊಟ್ಟೆ ಇಂದ ತಳ್ಳಿದ್ದಾರೆ. ಇದೆಲ್ಲ ಆದ್ಮೇಲೆ ಹೊಟ್ಟೆ ಇಂದ ತಳ್ಳಿದ್ರೆ ನಮಗೆ ಹೇಗಾಗುತ್ತೆ ಅಂತ ಗೊತಾಗಬೇಕು ಅಂತ ಹೇಳಿ ನಾನು ಅವ್ರ್ನ ತಳ್ಳಿದ್ದೇ. ಜಗದೀಶ್ ಅವ್ರು ಹೊಡ್ದಿದ್ದು ಜನಗಳು ನೋಡಿಲ್ಲ, ಆದ್ರೆ ನಾವು ನೋಡಿದೀವಿ. ನಾವು ೨೪ ಗಂಟೆ ಅಲ್ಲೇ ಇದ್ವಿ, ಆದ್ರೆ ಜನ ನೋಡೋದು ಬರಿ ಒಂದು ಗಂಟೆ ಶೋ ಅಷ್ಟೇ ಅಂತ ರಂಜಿತ್ ಹೇಳಿದ್ರು.
ಜಗದೀಶ್ ಅವರು ಚೈತ್ರ ಅವರ ಪೆರೋಸ್ನಲ್ ಅಥವಾ ಹೊರಗಿನ ವಿಷಯಗಳನ್ನು ಕೂಡ ಮಾತಾಡಿ ಅವರನ್ನು ಕೆಣಕಿದ್ದರು. ಚೈತ್ರ ಅವರ ಮೇಲೆ ೨೮ ಕೇಸ್ ಗಳಿವೆ ಹಾಗು ಅವರ ಮೇಲಿರುವ ೫ ಕೋಟಿ ಯಾ ಆರೋಪದ ಬಗ್ಗೆ ಕೂಡ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದಾಗ, ಮನೆಯರು ಹೊರಗಿನ ವಿಷಯ ಮಾತನಾಡುವ ಅವಶ್ಯಕತೆ ಇಲ್ಲ ಎಂದು ವಿರೋದಿಸ್ಸಿದ್ದರು.
ಜಗದೀಶ್ ಅವರಿಗೆ ಕ್ರಶ್ ಓಫ್ ಕರ್ನಾಟಕ ಕೊಟ್ಟಾಗಲೂ ಸಹ ನಮಗೆ ಬೇಸರ ಆಗಿರಲಿಲ್ಲ, ನಾವು ಚಪ್ಪಾಳೆ ತಟ್ಟಿದ್ದೆವು. ಆದರೆ ಜಗದೀಶ್ ಅವರು ಮನೆಯಲ್ಲಿ ಬೆಳಗ್ಗೆ ಒಂದು ರೀತಿ ಹಾಗು ರಾತ್ರಿ ಒಂದು ರೀತಿ ಇದ್ದರು, ಜಗಳವಾಡುವುದನ್ನೇ ಕಂಟೆಂಟ್ ಮಾಡಿಕೊಂಡಿದ್ದರು ಎಂದು ರಂಜಿತ್ ತಿಳಿಸಿದರು.
ಜಗದೀಶ್ ಅವರು ಬಿಗ್ ಬಾಸ್ ಮನೆಯ ಹೊರಗೆ ಬಂದಮೇಲೆ ಕ್ಷಮೆ ಕೇಳಿದ್ದರ ಬಗ್ಗೆ ರಂಜಿತ್ ಪ್ರತಿಕ್ರಿಯಿಸುತ್ತಾ, ಈಗ ಸಾರಿ ಕೇಳಿರೋದು ಹೇಗೆ ಅಂದ್ರೆ ತಪ್ಪಾಗಿ ಹೋಗಿದೆ, ಇದರಿಂದ ಅವರಿಗೆ ಏನು ಎಫೆಕ್ಟ್ ಇಲ್ಲ, ಆದರೆ ನಾನು ಈ ಪ್ರೊಫೆಶನ್ ಅಲ್ಲೇ ಇರೋದು, ನನಿಗೆ ಎಫೆಕ್ಟ್ ಆಗಿದೆ ಎಂದು ರಂಜಿತ್ ತಿಳಿಸಿದರು. ಇದರ ಜೊತೆಗೆ ನೀವು ಲಾಯರ್ ಆಗಿ ನ್ಯಾಯ ಕೊಡಿಸೋ ಸ್ಥಾನದಲ್ಲಿರಬೇಕಿತ್ತು, ಇದಕ್ಕಿಂತ ಮುಂಚೆನೇ ನಿಮಗೆ ಎಲ್ಲರ ಜೊತೆ ಚೆನ್ನಾಗಿರಬೇಕು, ಜಗಳ ಮಾಡಬಾರದು ಅಂತ ಅನ್ನಿಸಲಿಲ್ವ, ಒಬ್ರ ಜೀವನ ಹಾಳಾದಮೇಲೆ ಅನ್ನಿಸ್ಸಿದ್ರೆ ಅದು ಯಾವ ರೀತಿ ಸರಿ ಆಗುತ್ತೆ ಅಂತ ಜಗದೀಶ್ ಅವರಿಗೆ ಮಾಧ್ಯಮದ ಮೂಲಕ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಬಂಧ 2024 – ಜ್ಞಾನ ಭಂಡಾರ 1